ಚಿತ್ರ: ಟೋನಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್-ನಾಗೇಂದ್ರ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು 
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ ಹೋ ಚಲುವಾ ||ಪಲ್ಲವಿ||

ಜೀವನಾ ಕಡಲಲ್ಲಿ ನೀ ಗಂಗೆ ಸಂಗಮದಂತೇ ಬೆರೆಯೆ ಓಡೋಡಿ ಬಂದೇ 
ಲಾಲಲಾ...ಲಾಲಲಾ...ಲಾಲಲಾ..ಲಲಲಲ 
ಪ್ರೇಮದಾ ಹೊಸ ಬಾನಲೀ ಲಜ್ಜೆ ಕೆಂಪೇರಿದಂತೇ ನೀನು ರಂಗನ್ನೇ ತಂದೇ
ಚಲುವನು ಸೂಸಿ ಬಲೆಯನು ಬೀಸಿ
ಚಲುವನು ಸೂಸಿ ಬಲೆಯನು ಬೀಸಿ
ಸೆಳೆದಾ ಸೊಗಸೂ ನಿಂದೇನೂ ಹೋ 
||ಚಲುವಾ||

ಪ್ರೀತಿಗೆ ಮುಳ್ಳಾಗಿಹಾ ತೆರೆಯು ದೂರಾಗಬೇಕೂ ಮನಸು ಒಂದಾಗಬೇಕೂ 
ಲಾಲಲಾ...ಲಾಲಲಾ...ಲಾಲಲಾ...ಲಲಲಲ 
ಕಂಬನೀ ಈ ಕಣ್ಣಲ್ಲೀ ಇಂದು ಕೊನೆಯಾಗ ಬೇಕೂ ನಗುತ ನೀನಿರಬೇಕೂ
ಜೀವವು ನೀನು ದೇಹವು ನಾನೂ
ಜೀವವು ನೀನು ದೇಹವು ನಾನೂ
ಮನವಾ ಕವಿದಾ ನೋವೇನು ಹೋ
||ಚಲುವಾ||

category: ಕನ್ನಡ ಚಿತ್ರಸಾಹಿತ್ಯ
category: ಟೋನಿ ಚಿತ್ರ
category: ಆರ್.ಎನ್.ಜಯಗೋಪಾಲ್ ಸಾಹಿತ್ಯ
category: ಎಸ್.ಪಿ.ಬಾಲಸುಬ್ರಹ್ಮಣ್ಯಂ  ಗಾಯನ